ಮುಚ್ಚಿ

ಇನ್ನೋವೇಶನ್ ಮೇಳ (ಆವಿಷ್ಕಾರೋತ್ಸವ) 2019

ಇನ್ನೋವೇಶನ್ ಮೇಳ (ಆವಿಷ್ಕಾರೋತ್ಸವ) 2019
ಪ್ರಾರಂಭಿಸಿ: 16/01/2019 ಕೊನೆ: 18/01/2019

ಈವೆಂಟ್ ವಿವರಣೆ

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪ್ಇಷತ್ತಿನ ಅಂಗಸಂಸ್ಥೆಯಾದ ಕಲಬುರಗಿಯ ವಿಜ್ಞಾನ ಕೇಂದ್ರದಲ್ಲಿ 2019 ಜನೇವರಿ 16-18 ರವರೆಗೆ ಇನ್ನೋವೇಶನ್ ಮೇಳವನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು ತಾವು ಮಾಡಿದ ನವ ನವೀನ ಸಂಶೋಧನೆಯನ್ನು, ಸಾಧನ / ಸಾಮಗ್ರಿಗಳನ್ನು ಪ್ರದರ್ಶಿಸಲು ಇದೊಂದು ಸುವರ್ಣವಕಾಶ, ವಿಜ್ಞಾನ, ತಂತ್ರಜ್ಞಾನ, ಗಣಿತ, ಕಲೆ, ಕೃಷಿ, ಎಂಜಿನಿಯರಿಂಗ, ವೈರ್ಯಕೀಯ, ಔಷಧ ವಿಜ್ಞಾನ, ಆಭರಣ, ಕರಕುಶಲ ಕ್ಷೇತ್ರದಲ್ಲಿ ಮಾಡಿದ ನಾವೀನ್ಯತೆ, ಮಾನವನ ಜೀವನ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ಮಾಡಿದ ಸಾಮಗ್ರಿ/ಸಾಧನ/ಪರಿಕರ, ಇನ್ನಿತರೆ ಕ್ಷೇತ್ರಗಳಲ್ಲಿ ತಾವೇ ಪ್ರಯೋಗ ಮಾಡಿ ಕಂಡುಹಿಡಿದ ಸಾಧನ, ನಾವೀನ್ಯತೆ, ಪ್ರಾಜೆಕ್ಟುಗಳ ವಿವರಣಾತ್ಮಕ ಮಾದರಿಗಳನ್ನು ಈ ಮೇಳದಲ್ಲಿ ಪ್ರದರ್ಶಿಬಹುದು.

ಆಸಕ್ತಿಯುಳ್ಳ ಪ್ರಯೋಗಶೀಲ ಪ್ರೌಢಶಾಲಿ, ಪದವಿ ಪೊರ್ವ ಕಾಲೇಜು, ಪದವಿ ಕಾಲೇಜು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಇತರೆ ಸಂಶೋಧಕರು – ಸಾಧಕರು, ತಮ್ಮ ಮಾದರಿಗಳ/ ಪ್ರಯೋಗಗಳ ವಿವರಣೆಯನ್ನು ವಿಜ್ಞಾನ ಕೇಂದ್ರಕ್ಕೆ ಕಳುಹಿಸಬೇಕೆಂದು ಸೂಚಿಸಲಾಗಿದೆ. ಆಯ್ಕೆ ತಂಡದಿಂದ ವಿಶ್ಲೇಷಣೆಹೊಂಡು ಆಯ್ಕೆಯಾದ ಮಾದರಿ / ಸಾಧನ / ಪ್ರಯೋಗಗಳನ್ನು ಮಾತ್ರ ಈ ಮೇಳದಲ್ಲಿ ಪ್ರದರ್ಶಿಬಹುದು. ಈ ಮೇಳದಲ್ಲಿ ನಡೆಯುವ ಇನ್ನಿತರೆ ಚಟುವಟಿಗಳು – ಕಸದಿಂದ ರಸ, ವೀವೇ ತಯಾರಿಸಿ ಕಮ್ಮಟ, ಪವಾಡದ ಹಿಂದಿರುವ ವಿಜ್ಞಾನ, ಕಾಗದದಿಂದ ವಿವಿಧ ಆಕೃತಿಗಳ ರಚನಾ ಕಾರ್ಯಾಗಾರ, ಕ್ಲೇಮಾಡಲಿಂಗ, ಇತ್ಯಾದಿಗಳು. ಸಂಶೋಧಕರು, ಸಾಧಕರು ಪ್ರಯೋಗ ಮತ್ತು ಮಾದರಿಗಳಲ್ಲದೆ ವಿವಿಧ ಸ್ಟಾರ್ಟಅಪ್ ಕಂಪನಿಗಳು, ವಿವಿಧ ಇಲಾಖೆಗಳಲ್ಲಿ ಆಗುತ್ತಿರುವ ಸಂಶೋಧನೆ, ನಾವೀನ್ಯತೆಗಳ ಕುರಿತು ಹಾಗೂ ಸೌಲಭ್ಯಗಳ ಕುರಿತು ಪ್ರದರ್ಶಿಸುವ ಅವಕಾಶವನ್ನು ಈ ಮೇಳದಲ್ಲಿ ನೀಡಲಾಗುವುದು.

ಸ್ಥಳ: ಜಿಲ್ಲಾ ವಿಜ್ಞಾನ ಕೇಂದ್ರ, ಕಲಬುರಗಿ
ನೋಟ (585 KB)