ಮುಚ್ಚಿ

ಹಿಂದಿನ ಕಾರ್ಯಕ್ರಮಗಳು

ಪ್ರಾರಂಭಿಸಿ: 26/08/2018
ಕೊನೆ:26/08/2018

ಕಲಬುರಗಿ ವಿಮಾನ ನಿಲ್ದಾಣ ಪ್ರಾಯೋಗಿಕ ಲಘು ವಿಮಾನ ಹಾರಾಟ

ಕಲಬುರಗಿ ವಿಮಾನ ನಿಲ್ದಾಣವು ಕಲಬುರಗಿಕ್ಕೆ ಸೇವೆ ಸಲ್ಲಿಸಲು ನಿರ್ಮಿಸಲಾದ ಒಂದು ಗ್ರೀನ್ಫೀಲ್ಡ್ ವಿಮಾನನಿಲ್ದಾಣವಾಗಿದೆ. ಶ್ರೀನಿವಾಸ್ ಸರಡಗಿ ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿ 10 (ಸೇಡಂ ರಸ್ತೆ) ನಲ್ಲಿ 15 ಕಿ.ಮೀ ದೂರದಲ್ಲಿದೆ.ವಿಮಾನ ನಿಲ್ದಾಣದ ಒಟ್ಟು ವಿಸ್ತೀರ್ಣವು 750ಎಕರೆ ಇದೆ. ಪ್ರಾಯೋಗಿಕ ಲಘು ವಿಮಾನ ಹಾರಾಟ ಅನ್ನು ಆಗಸ್ಟ್ 26, 2018 ರಂದು ಯಶಸ್ವಿಯಾಗಿ ನಡೆಸಲಾಯಿತು. ರನ್ವೇ ಭಾರತದ 10 ನೇ ಮತ್ತು ಕರ್ನಾಟಕದ 2 ನೇ ಅತಿದೊಡ್ಡ ರನ್ವೇದಾಗಿದೆ.

ಇನ್ನಷ್ಟು ವಿವರ...
ಪ್ರಾರಂಭಿಸಿ: 16/01/2019
ಕೊನೆ:18/01/2019

ಇನ್ನೋವೇಶನ್ ಮೇಳ (ಆವಿಷ್ಕಾರೋತ್ಸವ) 2019

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪ್ಇಷತ್ತಿನ ಅಂಗಸಂಸ್ಥೆಯಾದ ಕಲಬುರಗಿಯ ವಿಜ್ಞಾನ ಕೇಂದ್ರದಲ್ಲಿ 2019 ಜನೇವರಿ 16-18 ರವರೆಗೆ ಇನ್ನೋವೇಶನ್ ಮೇಳವನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು ತಾವು ಮಾಡಿದ ನವ ನವೀನ ಸಂಶೋಧನೆಯನ್ನು, ಸಾಧನ / ಸಾಮಗ್ರಿಗಳನ್ನು ಪ್ರದರ್ಶಿಸಲು ಇದೊಂದು ಸುವರ್ಣವಕಾಶ, ವಿಜ್ಞಾನ, ತಂತ್ರಜ್ಞಾನ, ಗಣಿತ, ಕಲೆ, ಕೃಷಿ, ಎಂಜಿನಿಯರಿಂಗ, ವೈರ್ಯಕೀಯ, ಔಷಧ ವಿಜ್ಞಾನ, ಆಭರಣ, ಕರಕುಶಲ ಕ್ಷೇತ್ರದಲ್ಲಿ ಮಾಡಿದ ನಾವೀನ್ಯತೆ, ಮಾನವನ ಜೀವನ ಮತ್ತು ಶಿಕ್ಷಣದ ಗುಣಮಟ್ಟ […]

ನೋಟ (585 KB) ಇನ್ನಷ್ಟು ವಿವರ...
ಪ್ರಾರಂಭಿಸಿ: 15/09/2018
ಕೊನೆ:29/09/2018

ಖಾದಿ ಉತ್ಸವ-2018

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನಬಾರ್ಡ್, ಜಿಲ್ಲಾಡಳಿತ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ಖಾದಿ ಉತ್ಸವ-2018”ರ ಅಂಗವಾಗಿ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟವನ್ನು ಇದೇ ಸೆಪ್ಟೆಂಬರ್ 15 ರಿಂದ 29 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಬಳಿಯಿರುವ ಜಿಲ್ಲಾ ಕನ್ನಡ ಸಾಹಿತ್ಯ […]

ಇನ್ನಷ್ಟು ವಿವರ...