ಮುಚ್ಚಿ

ನ್ಯಾಯಾಲಯಗಳು

ಜಿಲ್ಲಾ ಕೋರ್ಟ್ ಕಲಬುರಗಿ 1935 ರಲ್ಲಿ ಅಸ್ತಿತ್ವಕ್ಕೆ ಬಂದಿತು. 2004 ರಲ್ಲಿ ಹಳೆಯ ಕೋರ್ಟ್ ಕಟ್ಟಡದಲ್ಲಿ ಈ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿತ್ತು. ನಂತರ ಹೊಸ ಕೋರ್ಟ್ ಕಟ್ಟಡವನ್ನು ಎರಡು ಮಹಡಿಗಳೊಂದಿಗೆ ನಿರ್ಮಿಸಲಾಗಿರುತ್ತದೆ. ಮುಖ್ಯ ಕಟ್ಟಡವು ಸಿದ್ಧಾರ್ಥ ಲಾ ಕಾಲೇಜ್, ಶರಣಬಅವೇಶ್ವರ ರಸ್ತೆ ಕಲಬುರಗಿ ಮತ್ತು ರೈಲ್ವೆ ಸ್ಟೇಷನಗೆ ಸಮೀಪದಲ್ಲಿದೆ. ಕೋರ್ಟ್ ಸಂಕೀರ್ಣದಲ್ಲಿ ಪ್ರಸ್ತುತ ಒಂದು ಕೋರ್ಟ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಧೀಶರ ನ್ಯಾಯಾಲಯ ಹಾಗೂ ನಾಲ್ಕು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಯಾಧೀಶರ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾ ನ್ಯಾಯಾಧೀಶರು, ಕುಟುಂಬ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ನ್ಯಾಯಾಲಯದ ಪ್ರಾಂಗಣದಲ್ಲಿ ಎರಡು ಪ್ರತ್ಯೇಕ ವಕೀಲರ ಸಂಘದ ಕಟ್ಟಡಗಳು ಇರುತ್ತವೆ ಮತ್ತು ಮಹಿಳಾ ವಕೀಲರಿಗಾಗಿ ಪ್ರತ್ಯೇಕ ಸ್ದಳದ ಸೌಕರ್ಯಗಳು ಎರಡುಾ ಕಟ್ಟಡಗಳಲ್ಲಿ ಒದಗಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಪ್ರಾಂಗಣದ ಒಳಗಡೆ ವಕೀಲರ ಸಂಘದ ಕಟ್ಟಡದ ಕೆಳ ಮಹಡಿಯಲ್ಲಿ ಕ್ಯಾಂಟೀನ್ ಸೌಲಭ್ಯ ಮತ್ತು ಟೈಪಿಂಗ್ ಪೂಲ್ ಇದೆ. ಕಟ್ಟಡವು ಉತ್ತಮ ಸ್ಥಿತಿಯಲ್ಲಿದೆ ಮತ್ತು ಎಲ್ಲಾ ಸಿವಿಲ್ ಸೌಲಭ್ಯವನ್ನು ಅದರ ಕಟ್ಟಡದಲ್ಲಿ ಹೊಂದಿದೆ.

ನ್ಯಾಯಾಲಯದ ಹೊಸ ಕಟ್ಟಡದಲ್ಲಿ ಪ್ರಸ್ತುತ ಒಂದು ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ಪ್ರಧಾನ ನ್ಯಾಯಿಕ ದಂಡಾಧಿಕಾರಿಗಳ, ನ್ಯಾಯಾಲಯ ಹಾಗೂ ಮೂರು ಹೆಚ್ಚುವರಿ ಹಿರಿಯ ಸಿವಿಲ್‍ ನ್ಯಾಯಾಧೀಶರ ನ್ಯಾಯಾಲಯಗಳು ಮತ್ತು ಒಂದು ಪ್ರಧಾನ ಸಿವಿಲ್‍ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳು ಸಹ ಕಾರ್ಯನಿರ್ವಹಿಸುತ್ತಿವೆ. ಕೋರ್ಟ್ ಕಾಂಪ್ಲೆಕ್ಸ್ ಹತ್ತಿರವಿರುವ “ಮಿನಿ ವಿಧಾನ ಸೌಧ” ದಲ್ಲಿ ಕಾರ್ಮಿಕ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ವಿಶೇಷ ನ್ಯಾಯಿಕ ದಂಡಾಧಿಕಾರಿಗಳು (ರೈಲ್ವೇ) ನ್ಯಾಯಾಲಯ ಸಹ ರೇಲ್ವೆ ಸ್ಟೇಷನ್‍ ಹತ್ತಿರ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ಉಚ್ಚ ನ್ಯಾಯಲಯ ಕಲಬುರಗಿ ಪೀಠ

ಕರ್ನಾಟಕ ಉಚ್ಚ ನ್ಯಾಯಲಯ ಕಲಬುರಗಿ ಪೀಠ