ಪಶು ಸಂಗೋಪನೆ ಇಲಾಖೆಯ ಹಳ್ಳಿ ಜನರ ಆರ್ಥಿಕ ಬೆಳವಣಿಗೆಯಲ್ಲಿ ಹಾಗೂ ಅವರುಗಳಿಗೆ ಉದ್ಯೋಗ ದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದೆ. ಹಳ್ಳಿಗಳಲ್ಲಿ ಬಡಜನರು ಅದರಲ್ಲೂ ಸಣ್ಣ ಮತ್ತು ಅತೀ ಸಣ್ಣ ರೈತರು ತಮಗೆ ಲಭ್ಯವಾದ ಬೆಳೆಗಳಿಂದ ಪಶು ಸಂಪತ್ತು ಬೆಳೆಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ಜಿಲ್ಲೆಯಲ್ಲಿ 214 ಪಶು ವೈದ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ (1) ಸುಪರ ಸ್ಪೇಷಾಲಿಟಿ ಆಸ್ಪತ್ರೆ. ಪಶು ಆಸ್ಪತ್ರೆ 29, 109 ಪಶು ಚಿಕಿತ್ಸಾಲಯ, 68 ಪ್ರಾಥಮಿಕ ಪಶು ಚಿಕಿತ್ಸಾಲಯ, 7 ಸಂಚಾರಿ ಪಶು ಚಿಕಿತ್ಸಾಲಯಗಳು ಇರುತ್ತವೆ.
ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಸರ್ಕಾರಿ ಆದೇಶ ಸಂ.ಪಸಂಮಿ/278/ಪ.ಸ.ಸೇ/2016 (ಭಾಗ-2) ದಿನಾಂಕ 3-1-2018 ರಂತೆ, ಪ್ರಾಥಮಿಕ ಚಿಕಿತ್ಸಾಲಯಗಳು, ಪಶು ಚಿಕಿತ್ಸೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 817 ಹುದ್ದೆಗಳು ಮಂಜೂರು 817, ಭರ್ತಿ 386, 318 ಹುದ್ದೆಗಳು ಖಾಲಿ ಇರುತ್ತವೆ.
ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಗಳು
- ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡುವುದು.
- ಜಾನುವಾರುಗಳಿಗೆ ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ದ ಲಸಿಕೆ ಹಾಕುವುದು.
- ಜಾನುವಾರು ಆರೋಗ್ಯ ರಕ್ಷಣೆಗೆ/ಚಿಕಿತ್ಸೆ ಕೊಡುವದು.
- ಮೇವು ಅಭಿವೃದ್ಧಿ ಕಾರ್ಯಕ್ರಮ.
- ರೈತರ ಮನೆಬಾಗಿಲಿಗೆ ಪಶು ಚಿಕಿತ್ಸಾ ಸೌಲಭ್ಯ/ಕೃತಕ ಗರ್ಭಧಾರಣೆ ಸೌಲಭ್ಯ ದಗಿಸುವುದು.
- ಜಾನುವಾರುಗಳಿಗೆ ವಿಮೆ ಮಾಡಿಸುವುದು.
- ರೈತರಿಗೆ ಕುರಿ/ಮೇಕೆ ಸಾಕಾಣಿಕೆ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮ ಏರ್ಪಡಿಸುವುದು.
- ರೈತರ ಗೊಡ್ಡ ಹೈನುರಾಸುಗಳು ಚಿಕಿತ್ಸಾ ಶಿಬಿರ ಏರ್ಪಡಿಸುವುದು.