- ಕಲಬುರಗಿ ಜಿಲ್ಲೆಯು ಖುಷ್ಕಿ ಪ್ರಧಾನ ಕೃಷಿ ಜಿಲ್ಲೆಯಾಗಿದೆ “ಕೃಷಿತೋ ನಾಸ್ತಿ ದುರ್ಭಿಕ್ಷಂ’’ ನಂತೆ ನಮ್ಮ ನಾಡಿನ ರೈತ ಸಮುದಾಯುವು ಇಂದಿಗೂ ಆಧುನಿಕ ಕೃಷಿಯ ಬಗ್ಗೆ ಜಾಗೃತವಾಗಿದ್ದು ಕೃಷಿ ವೃತ್ತಿಯ ಬಗ್ಗೆ ಗೌರವ ಕಾಳಜಿ ಮುಂದುವರೆದಿದೆ.
- ಮಣ್ಣು ನೈಸರ್ಗಿಕ ಪರಿಸರದ ಒಂದು ಪ್ರಮುಖ ಅಂಶ ಕೃಷಿ ಇಲಾಖೆಯು ಮಣ್ಣು ಆರೋಗ್ಯ ಅಭಿಯಾನದಡಿ 2018-19ನೇ ಸಾಲಿನ ಅಂತ್ಯಕ್ಕೆ ಜಿಲ್ಲೆಯ ರೈತ ಹಿಡುವಳಿದಾರರಿಗೆ ಮಣ್ಣು ಪರಿಕ್ಷೆ ಆಧಾರಿತ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ಮಣ್ಣಿನಲ್ಲಿನ ನೂನ್ಯತೆ ಹಾಗೂ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮ ಕೈಗೋಳ್ಳಲಾಗುವುದು. ಮಣ್ಣು ಮಾದರಿಗಳನ್ನು ಸಂಗ್ರಹಿಸಲು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ಯಯಿಕೆ ಕೇಂದ್ರದವರ ನೆರವಿನೊಂದಿಗೆ ಅಭಿವೃದ್ದಿ ಮಾಡಿಸಿರುವ ಜಿಐಎಸ್-ಜಿಪಿಎಸ್ ಆಧಾರಿತ “ಸಾಲಯಿಲ್ ಕಲೆಕ್ಟರ್ ಅಪ್ಲಿಕೇಷನ್’’ ಬಳಸಿ ಗ್ರಾಮಗಳ ಡಿಜಿಟೈಸ್ಜ್ಡ ಕೆಡಸ್ಟ್ರಲ್ ನಕ್ಷೆಗಳಲ್ಲಿ ಗ್ರಿಡಗಳನ್ನು ಗುರುತಿಸಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ ಇಲಾಖೆಯ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗುತ್ತಿದೆ.
- ಕೃಷಿ ಅಭಿಯಾನ: ಕೃಷಿ ಮತ್ತು ಕೃಷಿ ಸಂಭಂದಿತ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲು ಜಿಲ್ಲೆಯ 32 ಹೋಬಳಿಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
- “ಬೀಜದಂತೆ ಬೆಳೆ’’ ಎನ್ನುವದನ್ನು ಪ್ರತಿವರ್ಷವು ಪ್ರಮಾಣಿತ, ನಿಜ ಚೀಟಿ ಬೀಜವನ್ನು ರಿಯಾಯ್ತಿ ದರದಲ್ಲಿ ವಿತರಿಸಲಾಗುತ್ತಿದ್ದು ಇದಕ್ಕಾಗಿ ಪ್ರತಿವರ್ಷ ಅನುದಾನ ವಿನಿಯೋಗಿಸಲಾಗುತ್ತಿದೆ.
- ಸಂರಕ್ಷಿತ ನೀರಾವರಿ: ನೀರು ನಿಸರ್ಗದತ್ತವಾದ ಕ್ಲುಪ್ತಸಾವುಗ್ರಿ, ಲಭ್ಯ ನೀರಿನ ಬಳಕೆ ಮಾಡಿ ತುಂತುರು ಹನಿ ನೀರಾವರಿ ಅಳವಡಿಸಿ ಅಧಿಕ ಕ್ಷೇತ್ರವನ್ನು ನೀರಾವರಿಗಿ ಒಳಪಡಿಸಿ, ಕೃಷಿ ಕ್ಷೇತ್ರ ಹಾಳಾಗದಂತೆ ನಿರ್ವಹಿಸಿ ಉತ್ತಮ ಇಳುವರಿ ಪಡೆಯುವುದು. ಪ್ರತಿ ವರ್ಷವು ಸಾವಿರಾರು ತುಂತುರು/ಹನಿ ನೀರಾವರಿ ಘಟಕಗಳನ್ನು ರಿಯಾಯ್ತಿ ದರದಲ್ಲಿ ವಿತರಿಸಲಾಗುತ್ತಿದೆ.
- ಸಾವಯುವ ಕೃಷಿ: ಸಾವಯುವ ಕೃಷಿಯ ಒಂದು ಸಮಗ್ರ ಕೃಷಿ ಉತ್ಪಾದನಾ ನಿರ್ವಹಣಾ ಪದ್ದತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲವನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಹಾಗೂ ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಮತ್ತು ರೋಗ ನಿರ್ವಹಣೆ ಕೈಗೊಂಡು ಗುಣ ಮಟ್ಟದ ಆಹಾರ ಉತ್ಪಾದನೆ ಕೈಗೊಳ್ಳುವ ಸುಸ್ಥಿರ ಬೇಸಾಯ ಪದ್ದತಿ ಅನುಷ್ಟಾನಕ್ಕೆ ಬಂದಿದೆ. ಸಾವಯುವ ಕೃಷಿ ಪ್ರೋತ್ಸಾಹಿಸಲು “ಸಾವಯುವ ಭಾಗ್ಯ’’ ಯೋಜನೆಯನ್ನು ಇಲಾಖೆ ತಂದಿದೆ.
- ಕೃಷಿ ಯಾಂತ್ರಿಕರಣ ಯೋಜನೆ: ಕೃಷಿ ಕಾರ್ಮಿಕರ ಕೊರತೆ ನೀಗಿಸುವುದು ಹಾಗೂ ಅವರ ಮೇಲಿನ ಅವಲಂಬನೆ ಕಡಿಮೆಗೊಳಿಸುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡುವುದು, ಉತ್ಪಾದಕತೆ ಹೆಚ್ಚಿಸುವುದು ಯಾಂತ್ರಿಕರಣ ಯೋಜನೆಯ ಮುಖ್ಯ ಉದ್ದೇಶಗಳು. ಕೃಷಿ ಇಲಾಖೆಯಲ್ಲಿ ಭೂಮಿ ಸಿದ್ದತೆಯಿಂದ ಕೊಯ್ಲ ಮತ್ತು ಕೊಯ್ಲೊತ್ತರ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ.
- ಖುಷ್ಕಿ ಭೂಪ್ರದೇಶ ಅಭಿವೃದ್ಧಿ: ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನಿಯಡಿ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಪ್ರತಿ ಹನಿ ಮಳೆ ನೀರನ್ನು ಸ್ಥಳೀಯವಾಗಿ ಇಂಗುವಂತೆ ಮಾಡಿ ಗತ್ಯಂತರವಿಲ್ಲದೆ ಹರಿದು ಹೋಗುವ ನೀರನ್ನು ಸಂಗ್ರಹಿಸಿಟ್ಟು ಮರು ಬಳಕೆ ಜೊತೆಗೆ ಅಂತರ್ಜಲ ಹೆಚ್ಚಿಸಲಾಗುತ್ತದೆ.
- ರೈತ ಸಂಪರ್ಕ ಕೇಂದ್ರ: ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ “ರೈತ ಮಿತ್ರ ಯೋಜನೆ’’ ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು “ರೈತ ಸಂಪರ್ಕ ಕೇಂದ್ರ’’ ಎಂದು ಕರೆಯಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 32 ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.
- ಆತ್ಮಹತ್ಯೆ ಕೈಗೊಂಡ ರೈತ ಕುಟುಂಬಗಳಿಗೆ ಪರಿಹಾರ ಧನ ಹಾಗೂ ಆಕಸ್ಮಿಕ ಸಾವು ಪ್ರಕರಣಗಳಾದ ಹಾವು ಕಡಿದು ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ.
- ಇಲಾಖೆಯು ಇನ್ನು ಹಲವಾರು ಕಾರ್ಯಕ್ರಮಗಳು ರೈತರ ಅಭ್ಯುದಯಕ್ಕಾಗಿ ರೂಪಿಸಿವೆ.
ಸಂಪರ್ಕಿಸಿ
ಜಂಟಿ ನಿರ್ದೇಶಕರು
ಕೃಷಿ ಇಲಾಖೆ
ಕಲಬುರಗಿ -585101
ದೂರವಾಣಿ ಸಂಖ್ಯೆ: 08472-220270
ಇ-ಮೇಲ್: gmail.com [at] jdagulbarga[dot]com